Desktop Logo
Locations
Offers
Tickets
Rides
3 Oct, 2024
5 mins read

ದಸರಾ ಪ್ರಯುಕ್ತ ವಂಡರ್‌ಲಾದಲ್ಲಿ ವಿಶೇಷ ಕೊಡುಗೆ

eesanje
eesanje
Article-Banner-Img

ದಸರಾ ಪ್ರಯುಕ್ತ ವಂಡರ್‌ಲಾದಲ್ಲಿ ವಿಶೇಷ ಕೊಡುಗೆ
theme-park.png
ಬೆಂಗಳೂರು: ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ಆದ ವಂಡರ್‌ಲಾ, ಆನ್‌ಲೈನ್ನಲ್ಲಿ ಎರಡು ಟಿಕೆಟ್‌ ಖರೀದಿಸಿದರೆ ಒಂದು ಟಿಕೆಟ್‌ ಉಚಿತ ಪಡೆಯುವ ಕೊಡುಗೆಯನ್ನು ಘೋಷಿಸಿದೆ. ಅಕ್ಟೋಬರ್ 10 ರ ವರೆಗೆ ವಂಡರ್ಲಾ ಬೆಂಗಳೂರಿನಲ್ಲಿ ದಸರಾ ಹಬ್ಬದ ಈ ಕೊಡುಗೆಗಳು ಲಭ್ಯವಿರಲಿದ್ದು, ಈ ಅವಧಿಯಲ್ಲಿ ಖರೀದಿಸಿದ ಟಿಕೆಟ್‌ಗಳು ಅಕ್ಟೋಬರ್ 31 ರವರೆಗೆ ಬಳಕೆಗೆ ಮಾನ್ಯವಾಗಿರುತ್ತವೆ.
 

ಆಚರಣೆಯ ಭಾಗವಾಗಿ, ವಂಡರ್‌ಲಾ ದಸರಾ ರಜೆಯ ಸಮಯದಲ್ಲಿ ಹೆಚ್ಚುವರಿಯಾಗಿ ಸಂಜೆ 7 ಗಂಟೆಯವರೆಗೆ ಪಾರ್ಕ್‌ ತೆರೆದಿರಲಿದೆ. ಆದ್ದರಿಂದ ಸಾರ್ವಜನಿಕರು ಇನ್ನಷ್ಟು ವಿನೋದ ಮತ್ತು ಉತ್ಸಾಹವನ್ನು ಆನಂದಿಸಬಹುದು!
 

ರೋಮಾಂಚಕ ‘ದಸರಾ ಹಬ್ಬದ ಉತ್ಸವಗಳ ಪ್ರಯುಕ್ತ, ವಂಡರ್‌ಲಾ ಮನರಂಜನಾ ಕಾರ್ಯಕ್ರಮಗಳ ಸರಣಿಯನ್ನು ನಡೆಸುತ್ತಿದೆ! ಇದರಲ್ಲಿ ಅತ್ಯಾಕರ್ಷಕ ಡಿಜೆ ಪ್ರದರ್ಶನ, ಉತ್ಸಾಹಭರಿತ ಜುಂಬಾ ಸೆಷನ್‌ಗಳು, ಬೆರಗುಗೊಳಿಸುವ ಫೈರ್ ಶೋ ಪ್ರದರ್ಶನ ವಯೊಲಿನ್ ಫ್ಯೂಶನ್ ಮತ್ತು ಜೊತೆಗೆ ಲಿಕ್ವಿಡ್‌ ಡ್ರಮ್ ಪ್ರದರ್ಶನವೂ ಇರಲಿದೆ. ಈ ಎಲ್ಲಾ ರೋಮಾಂಚಕ ಆಕರ್ಷಣೆಗಳ ಜೊತೆಗೆ, ಮರೆಯಲಾಗದ ಹಬ್ಬದ ವಾತಾವರಣ ಭಾಗವಾಗಿ ವಂಡರ್‌ಲಾ ಅತ್ಯಾಕರ್ಷಕವಾಗಿ ಸಿಂಗಾರ ಗೊಂಡು, ದೀಪಾಲಂಕಾರದೊಂದಿಗೆ ಕಂಗೊಳಿಸಲಿದೆ.
offers.png
ಇದಲ್ಲದೆ, ಉದ್ಯಾನವನವು ವಿಶೇಷವಾದ ‘ಫುಡ್ ಕಾಂಬೊ 2 ಟಿಕೆಟ್‌ಗಳನ್ನು ಖರೀದಿಸಿ, 1 ಫುಡ್ ಕಾಂಬೊ ಟಿಕೆಟ್ ಪಡೆಯಬಹುದು. ಇದು ಆಟದ ಜೊತೆಗೆ ಊಟದ ಆನಂದವನ್ನೂ ನೀಡಲಿದೆ.
 

ಈ ಕುರಿತು ಪ್ರತಿಕ್ರಿಯಿಸಿದ ಅರುಣ್ ಕೆ. ಚಿಟ್ಟಿಲಪ್ಪಿಳ್ಳಿ, ವಂಡರ್ಲಾ ಹಾಲಿಡೇಸ್‌ನ ವ್ಯವಸ್ಥಾಪಕ ನಿರ್ದೇಶಕರು, “ದಸರಾ ಹಬ್ಬವು ನಮ್ಮ ನಾಡ ಹಬ್ಬವಾಗಿ ಆಚರಿಸಲಾಗಿದ್ದು ಪಾರಂಪರಿಕ ಸಂಪ್ರದಾಯಕ ಹಬ್ಬವಾಗಿದೆ. ಈ ಸಂತೋಷದಾಯಕ ಸಂಪ್ರದಾಯದ ಭಾಗವಾಗಲು ನಾವು ರೋಮಾಂಚನಗೊಂಡಿದ್ದೇವೆ. ನಮ್ಮ ವಿಶೇಷ ದಸರಾ ಕೊಡುಗೆಯು ಕೇವಲ ಸವಾರಿ ಅಷ್ಟೇ ಅಲ್ಲದೆ, ಬಗೆಬಗೆಯ ಆಹಾರ ಸವಿಯಲು ಉತ್ತೇಜಿಸುತ್ತದೆ. ಈ ಋತುವಿನಲ್ಲಿ ಕುಟುಂಬಗಳು ಮತ್ತು ಸ್ನೇಹಿತರು ಒಟ್ಟಿಗೆ ಸೇರಿ ಮರೆಯಲಾಗದ ನೆನಪುಗಳನ್ನು ರೂಪಿಸುವ ಉತ್ತಮ ಸ್ಥಳವಾಗಿದೆ ಎಂದರು”
 

ಸಾರ್ವಜನಿಕರು ವಂಡರ್‌ಲಾ ಆನ್‌ಲೈನ್ ಪೋರ್ಟಲ್ ಮೂಲಕ https://bookings.wonderla.com/ ನಲ್ಲಿ ಮುಂಗಡ ಟಿಕೆಟ್‌ ಕಾಯ್ದಿರಿಸಬಹುದು ಬೆಂಗಳೂರು ಪಾರ್ಕ್ +91 80372 30333, +91 9945557777 ಅನ್ನು ಸಂಪರ್ಕಿಸಬಹುದು.
 

FOLLOW US ON :

BangaloreDasara Holidaywonderla